ಶ್ರೀ ರಾಮಲಿಂಗೇಶ್ವರ ದೇವಸ್ಥಾನ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮಚಗಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನವು ಸುಮಾರು ೮೦೦ ವರ್ಷದ ಇತಿಹಾಸಹೊಂದಿದೆ. ದೇವಸ್ಥಾನವು ತೀರಾ ಜೀರ್ಣಾವಸ್ಥೆಗೆ ತಲುಪಿದ್ದು ಗ್ರಾಮದ ಸಮಸ್ತ ಶ್ರೇಯೋಭಿವೃದ್ಧಿಗಾಗಿ ಈ ದೇವಸ್ಥಾನವನ್ನು ಪುನರ್ ನಿರ್ಮಾಣದ ಕಾರ್ಯವನ್ನು ಕೈಗೊಳ್ಳಲು ಸ್ವರ್ಣವಲ್ಲಿಯ ಶ್ರೀ ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಮಹಾಸರಸ್ವತಿ ಸ್ವಾಮೀಜಿಯವರ ಆದೇಶವಾಗಿದೆ.
ಸದರೀ ದೇವಸ್ಥಾನ ನಿರ್ಮಾಣದ ಕಾರ್ಯಚಟುವಟಿಕೆಯನ್ನು ಈಗಾಗಲೇ ಹಮ್ಮಿಕೊಂಡಿದ್ದು ಆ ದಿಸೆಯಲ್ಲಿ ಸರಕಾರೀ ಕಾಯಿದೆಯ ಅಡಿಯಲ್ಲಿ ಒಂದು ಟ್ರಸ್ಟ್ ರಚಿಸಲಾಗಿದೆ.
